ವಿಜ್ಞಾನ ಸಂವಹನ ಚಟುವಟಿಕೆಗಳ ದೃಷ್ಟಿಯಿಂದ ೨೦೨೩ ಬಹಳವೇ ಖುಷಿಕೊಟ್ಟ ವರ್ಷ. ನನ್ನಂತಹ ಅನೇಕರಿಗೆ ಮಾರ್ಗದರ್ಶಕರಾಗಿದ್ದ ಅಡ್ಯನಡ್ಕ ಕೃಷ್ಣಭಟ್ ಅವರ ಪ್ರಾತಿನಿಧಿಕ ಬರಹಗಳ ಸಂಕಲನ ಲೋಕಾರ್ಪಣೆಯಾಗಿದ್ದು ಹಾಗೂ ಶ್ರೀಮಂಗಲದ ನೆನಪುಗಳ 'ನೂರೊಂದು ನೆನಪು ನ್ಯೂರಾನಿನಿಂದ' ಪ್ರಕಟವಾಗಿದ್ದು ನನ್ನ ದೃಷ್ಟಿಯಿಂದ ಈ ವರ್ಷದ ಪ್ರಮುಖಾಂಶಗಳು. ಜನವರಿಯಲ್ಲಿ ಭೋಪಾಲದಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ಹಬ್ಬದಲ್ಲಿ ಹಲವು ಕನ್ನಡದ ಕೆಲಸಗಳಿಗೆ ಸಾಕ್ಷಿಯಾಗಿದ್ದು, ನಾನೂ ವಿಷಯಮಂಡನೆ ಮಾಡಿದ್ದು ಸುಮಧುರ ನೆನಪು. ಕೊಳ್ಳೇಗಾಲ ಶರ್ಮ ಅವರ 'ತಳಿ-ಉಳಿ' ಕೃತಿಯ ಸಂಪಾದಕನೆನ್ನಿಸಿಕೊಂಡಿದ್ದು, ಡಾ. ಎ. ಸತ್ಯನಾರಾಯಣರೊಡನೆ ಸೇರಿ ಸಿದ್ಧಪಡಿಸಿದ 'ಡಿಜಿಟಲ್ ಕನ್ನಡ ಕೌಶಲ' ಪಠ್ಯಪುಸ್ತಕ ಬೆಂಗಳೂರು ವಿವಿಯಿಂದ ಪ್ರಕಟವಾಗಿದ್ದು...
ಹಂಪೆಯ ಸಮೀಪದಲ್ಲಿರುವ ದರೋಜಿ ಕರಡಿಧಾಮ ಅತ್ಯಂತ ವಿಶಿಷ್ಟವಾದದ್ದು. ಶ್ರೀ ಎಂ. ವೈ. ಘೋರ್ಪಡೆಯವರ ಪ್ರಯತ್ನಗಳಿಂದ ಸಂರಕ್ಷಿತ ಪ್ರದೇಶವಾಗಿ ಗುರುತಿಸಿಕೊಂಡ ಈ ಕುರುಚಲು ಕಾಡು, Sloth Bearಗಳ ತವರು (Sloth ಅಂದರೆ ಸೋಮಾರಿ ಅಂತ ಅರ್ಥ!). ಈ ಹಿಂದೆ ಒಂದೆರಡು ಬಾರಿ ಅಲ್ಲಿ ಹೋಗಿದ್ದಾಗ ವೀಕ್ಷಣಾ ಗೋಪುರದ ಮೇಲೆ ನಿಂತು ದೂರದಲ್ಲಿ ಕಾಣುವ ಕರಡಿಗಳನ್ನು ನೋಡುವ ಅವಕಾಶ ದೊರೆತಿತ್ತು. ಕಳೆದ ವರ್ಷ ಅಲ್ಲಿ ಸಫಾರಿ ಪ್ರಾರಂಭವಾಗಿದೆ ಎನ್ನುವ ವಿಷಯ ತಿಳಿದಲ್ಲಿಂದ ದರೋಜಿಗೆ ಮತ್ತೊಮ್ಮೆ ಭೇಟಿಕೊಡುವ ಯೋಜನೆ ರೂಪಿಸುತ್ತಿದ್ದೆ.ಈ ಯೋಜನೆಗೆ ಮಾರ್ಗದರ್ಶಕರಾಗಿ ಸಿಕ್ಕವರು ಹಂಪೆಯ ವಿನೋದ್ ಕುಮಾರ್. ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿರುವ ಅವರು...
ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್‌ಫೋನಿನತ್ತ ಕರೆದೊಯ್ಯುವ ಮೂಲಕ ಭಾರತವನ್ನು '2ಜಿ-ಮುಕ್ತ'ವಾಗಿಸುವ ತನ್ನ ಯೋಜನೆಯ ಅಂಗವಾಗಿ ರಿಲಯನ್ಸ್ ಜಿಯೋ ಹೊಸದೊಂದು ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಕಡಿಮೆ ಪ್ರವೇಶ ಬೆಲೆಯಲ್ಲಿ ಎಲ್ಲರೂ ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಾಗಬೇಕು ಎಂಬ ಗುರಿ, 'ಜಿಯೋಫೋನ್ ನೆಕ್ಸ್ಟ್' ಎಂಬ ಹೆಸರಿನ ಈ ಹೊಸ ಫೋನಿನ ವೈಶಿಷ್ಟ್ಯ.ರೂ. 6499/- ಮುಖಬೆಲೆಯ ಈ ಫೋನನ್ನು ಮೊದಲಿಗೆ ರೂ. 2499 (ರೂ. 1999 + ರೂ. 500 ಸಂಸ್ಕರಣಾ ಶುಲ್ಕ) ಮಾತ್ರ ಪಾವತಿಸುವ ಮೂಲಕ ನಮ್ಮದಾಗಿಸಿಕೊಳ್ಳುವುದು ಸಾಧ್ಯ. ಬಾಕಿ ಹಣವನ್ನು 18 ಅಥವಾ 24 ತಿಂಗಳ ಮಾಸಿಕ ಪಾವತಿ ಮಾಡುವ ಮೂಲಕ...
ಮಕ್ಕಳಿಗಾಗಿ ವಿನೂತನ ಕತೆಗಳನ್ನು ಪ್ರಕಟಿಸುವ ಮೂಲಕ ಹೆಸರುವಾಸಿಯಾಗಿರುವುದು ಪ್ರಥಮ್ ಬುಕ್ಸ್ ಸಂಸ್ಥೆ. ತನ್ನ ಬಹುತೇಕ ಪ್ರಕಟಣೆಗಳನ್ನು 'ಸ್ಟೋರಿವೀವರ್' ಆನ್‌ಲೈನ್ ವೇದಿಕೆಯ ಮೂಲಕ ಉಚಿತವಾಗಿ ನೀಡುತ್ತಿರುವ ಈ ಸಂಸ್ಥೆ, ಇದೀಗ ಅದೇ ವೇದಿಕೆಯನ್ನು ಬಳಸಿಕೊಂಡು ವಿನೂತನ ಸ್ಪರ್ಧೆಯೊಂದನ್ನು ಆಯೋಜಿಸಿದೆ. 'ರೀಟೆಲ್, ರೀಮಿಕ್ಸ್, ರೀಜಾಯ್ಸ್ ೨೦೨೦' ಎಂಬ ಹೆಸರಿನ ಈ ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕುತೂಹಲಕರ ಮಕ್ಕಳ ಕತೆಗಳನ್ನು ನಮ್ಮ ಭಾಷೆಗೆ ಅನುವಾದಿಸಬೇಕು ಎನ್ನುವುದು ಈ ಸ್ಪರ್ಧೆಯ ಹೂರಣ. ಈ ನಮೂನೆಯನ್ನು (https://bit.ly/RRR_Contest) ತುಂಬಿಸಿ, ನಮ್ಮ ಆಯ್ಕೆಯ ಭಾಷೆಯನ್ನು ತಿಳಿಸಿದರೆ ನಾವು ಅನುವಾದಿಸಬೇಕಾದ ಕತೆಯನ್ನು ಪ್ರಥಮ್ ಬುಕ್ಸ್ ಸೂಚಿಸಲಿದೆ. ಒಂದಕ್ಕಿಂತ...
Pratham Books, a non-profit publisher of Children's books, conducts an annual event called 'One Day, One Story.' As part of this event, they encourage interested people (called by Pratham as 'PBChamps') to go out and tell a story to kids on International Literacy Day. This is indeed an enjoyable experience, as Yashu and I had found out last year by telling the story...
ಕೆಲವು ದಿನಗಳ ಹಿಂದೆ ಮಗಳ ಸುಕನ್ಯಾ ಸಮೃದ್ಧಿ ಖಾತೆಗೆ ಹಣ ಹಾಕಲು ಬ್ಯಾಂಕಿಗೆ ಹೋಗಿದ್ದೆ. ಆನ್‌ಲೈನ್ ಟ್ರಾನ್ಸ್‌ಫರ್ ಮಾಡುವಂತಿಲ್ಲ ಎಂದಿದ್ದ ಕಾರಣ ಚೆಕ್ ತೆಗೆದುಕೊಂಡು ಹೋದೆ. ನನ್ನ ಕೈಯಲ್ಲಿ ಬೇರೆ ಬ್ಯಾಂಕಿನ ಚೆಕ್ ನೋಡಿದ ತಕ್ಷಣ ಕೌಂಟರಿನಲ್ಲಿದ್ದ ಅಧಿಕಾರಿ "ನಮ್ಮ ಬ್ಯಾಂಕಿನ ಚೆಕ್ ಇಲ್ಲದಿದ್ದರೆ ಖಾತೆಗೆ ಹಣ ಹಾಕುವಂತಿಲ್ಲ" ಎಂದರು. ಮೂರ್ನಾಲ್ಕು ವರ್ಷಗಳಿಂದ ಇಲ್ಲದ ಈ ನಿಯಮ ಈಗೇಕೆ ಎನ್ನುವುದಕ್ಕೆ ಅವರು ಸರಿಯಾಗಿ ಉತ್ತರಿಸದೆ ನಮ್ಮಲ್ಲೇ ಒಂದು ಅಕೌಂಟು ತೆರೆದು ಆಮೇಲೆ ಹಣ ಹಾಕಿ ಎಂದುಬಿಟ್ಟರು. ಉಪಯೋಗಿಸುವುದಿಲ್ಲ ಎಂದು ಗೊತ್ತಿದ್ದೂ ಇನ್ನೊಂದು ಅಕೌಂಟನ್ನು ತೆರೆಯುವುದು ಸಮಯ-ಶ್ರಮ ಎರಡೂ ವ್ಯರ್ಥಮಾಡಿದ...
ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಟ್ರಿಪಲ್ ಕ್ಯಾಮೆರಾ ರೂ. 14,999ಕ್ಕೆ ಲಭ್ಯ! ನೌಕಾಪಡೆಯ ಹಡಗುಗಳ ಪೈಕಿ ಸೇನಾಪತಿಯನ್ನು ಕರೆದೊಯ್ಯುವ, ಮತ್ತು ಆ ಕಾರಣಕ್ಕೆ ವಿಶೇಷ ಬಾವುಟವನ್ನು ಹಾರಿಸುವ ಹಡಗನ್ನು 'ಫ್ಲ್ಯಾಗ್‌ಶಿಪ್' ಎಂದು ಕರೆಯುತ್ತಾರಂತೆ. ಮೊಬೈಲ್ ಫೋನ್ ಲೋಕದಲ್ಲೂ ಅಷ್ಟೇ, ಯಾವುದೇ ಸಂಸ್ಥೆ ತಯಾರಿಸುವ ಅತ್ಯುತ್ತಮ ಸಾಧನಕ್ಕೆ ಫ್ಲ್ಯಾಗ್‌ಶಿಪ್ ಎಂದೇ ಹೆಸರು. ಸಾಮಾನ್ಯ ಫೋನುಗಳ ಹೋಲಿಕೆಯಲ್ಲಿ ಮುಂದುವರೆದ ಸೌಲಭ್ಯಗಳು, ಹೆಚ್ಚು ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯಿರುವ ಫ್ಲ್ಯಾಗ್‌ಶಿಪ್ ಫೋನುಗಳ ಬೆಲೆಯೂ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಈ ಹಣೆಪಟ್ಟಿ ಹೊತ್ತುಬರುವ ಫೋನುಗಳ ಬೆಲೆ ಆರಂಕಿ ಮುಟ್ಟುವುದೂ ಅಪರೂಪವೇನಲ್ಲ. ಕೈಗೆಟುಕುವ ಬೆಲೆಯ ಫೋನುಗಳಲ್ಲೂ ಹೆಚ್ಚಿನ ಸೌಲಭ್ಯಗಳನ್ನು...