Friday, May 29, 2009
Wednesday, May 27, 2009
Tuesday, May 12, 2009
Monday, May 11, 2009
ಇ ಆರ್ ಪಿ ಲೋಕ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ವಿಜ್ಞಾನ ಲೋಕ' ಪತ್ರಿಕೆ ಮೇ ೨೦೦೯ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ
ನಿಮ್ಮ ಮನೆ ಬೀದಿಯಲ್ಲೊಂದು ದಿನಸಿ ಅಂಗಡಿ. ಅಂಥ ದೊಡ್ಡದೇನಲ್ಲ. ಮಂಡಿಯಿಂದ ಸಾಮಾನು ತರುವುದು, ಅಂಗಡಿಯಲ್ಲಿ ಕೂತು ಮಾರುವುದು, ಮನೆಗೆ ಹೋಗುತ್ತ ದಾರಿಯಲ್ಲಿ ಮನೆಮನೆಗೆ ದಿನಸಿ ತಲುಪಿಸುವುದು ಎಲ್ಲವನ್ನೂ ಆ ಅಂಗಡಿಯ ಮಾಲಿಕ ರಾಮಚಂದ್ರನೇ ಮಾಡುತ್ತಾನೆ. ಹೋದವಾರ ಮಂಡಿಯಲ್ಲಿ ತಂದ ವಸ್ತುಗಳ ರಸೀತಿ, ಮುಂದಿನವಾರ ತರಬೇಕಾದ ವಸ್ತುಗಳ ಪಟ್ಟಿ, ಮೂಲೆಮನೆಯ ನಂಜಮ್ಮಜ್ಜಿ ಕೊಟ್ಟಿರುವ ಸಾಮಾನುಚೀಟಿ, ಸಾಲಗಾರರು ಕೊಡಬೇಕಾದ ಬಾಕಿಯ ಲೆಕ್ಕ ಇವನ್ನೆಲ್ಲ ಸದಾಕಾಲವೂ ಜೇಬಿನಲ್ಲಿಟ್ಟುಕೊಂಡಿರುತ್ತಾನೆ. ಆ ಚೀಟಿಗಳ ಆಧಾರದ ಮೇಲೆಯೇ ಅವನ ವ್ಯವಹಾರವೆಲ್ಲ ನಡೆದುಕೊಂಡುಹೋಗುತ್ತಿರುತ್ತದೆ. ಅಕ್ಕಿಚೀಲದ ತಳ ಕಾಣಿಸುತ್ತಿದ್ದರೆ, ಕೃಷ್ಣಪ್ಪನವರು ಕೇಳಿದ ಕೊಬ್ಬರಿಎಣ್ಣೆ ಮುಗಿದುಹೋಗಿದ್ದರೆ ಅವೆಲ್ಲ ತಕ್ಷಣವೇ ರಾಮಚಂದ್ರನ ಚೀಟಿಗೆ ದಾಖಲಾಗುತ್ತವೆ.
ಸಣ್ಣಪ್ರಮಾಣದ ವಹಿವಾಟು ನಡೆಸುವ ರಾಮಚಂದ್ರನ ದಿನಸಿ ಅಂಗಡಿಗೆ ಈ ಚೀಟಿ ವ್ಯವಸ್ಥೆ ಸಾಕಾಗಬಹುದು. ಆದರೆ ನಾಲ್ಕಾರು ಕಾರ್ಖಾನೆ, ಹತ್ತಾರು ಕಚೇರಿ ಜೊತೆಗೆ ಸಾವಿರಾರು ಸಿಬ್ಬಂದಿ ಹಾಗೂ ಗ್ರಾಹಕರನ್ನು ಹೊಂದಿರುವ ದೊಡ್ಡ ಸಂಸ್ಥೆಯೊಂದು ಇದೇ ರೀತಿಯಲ್ಲಿ ವ್ಯವಹಾರ ಮಾಡಲು ಹೋದರೆ ಏನಾಗಬಹುದು ಯೋಚಿಸಿದ್ದೀರಾ?
ಮುಂದೆ ಓದಿ... Read more...
Thursday, May 07, 2009
Saturday, May 02, 2009
ಕನ್ನಡ ವ್ಯಾಕರಣ ಪ್ರವೇಶ - ಹೊಸ ಆವೃತ್ತಿ ಬರುತ್ತಿದೆ!
ನನ್ನ ತಂದೆ ಶ್ರೀ ಟಿ ಎಸ್ ಗೋಪಾಲ್ ಅವರ 'ಕನ್ನಡ ವ್ಯಾಕರಣ ಪ್ರವೇಶ' ಇದೀಗ ಐದನೆಯ ಮುದ್ರಣ ಕಾಣುತ್ತಿದೆ. ಮೈಸೂರಿನ ಭಾರತೀ ಪ್ರಕಾಶನ ಪ್ರಕಟಿಸುತ್ತಿರುವ ಈ ಪುಸ್ತಕ ಸದ್ಯದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಈ ಪುಸ್ತಕದ ಬಗ್ಗೆ ಹಿರಿಯ ವಿದ್ವಾಂಸ ಡಾ| ಎನ್ ಕೆ ರಾಮಶೇಷನ್ ಅವರು ವ್ಯಕ್ತಪಡಿಸಿರುವ ಅನಿಸಿಕೆಗಳು ಇಲ್ಲಿವೆ.
ಟಿ ಎಸ್ ಗೋಪಾಲರ 'ಕನ್ನಡ ವ್ಯಾಕರಣ ಪ್ರವೇಶ' ಪುಸ್ತಕವು ವಿದ್ಯಾರ್ಥಿ-ಅಧ್ಯಾಪಕ ಇಬ್ಬರಿಗೂ ನೆರವಾಗುತ್ತದೆ, ಓದಿಸಿಕೊಂಡು ಹೋಗುತ್ತದೆ. ಶಾಸ್ತ್ರವನ್ನು ಸುಲಭವಾಗಿ, ತಿಳಿಯಾಗಿ ನಿರೂಪಿಸಿ ಮನಮುಟ್ಟಿಸುವ ಕಲೆ ಗೋಪಾಲ್ ಅವರಿಗೆ ಹೃದ್ಗತವಾಗಿದೆ.
ಅಕ್ಷರಗಳಿಂದ ಪತ್ರಲೇಖನದ ತನಕ, ಗಾದೆಮಾತು-ಪ್ರಬಂಧ, ತತ್ಸಮ-ತದ್ಭವಗಳು, ನಾನಾರ್ಥ-ಸಮಾನಾರ್ಥ-ವಿರುದ್ಧಾರ್ಥ ಪದಗಳು, ನುಡಿಗಟ್ಟು - ಈ ಎಲ್ಲ ವಿವರಗಳನ್ನೂ ಎಳೆಎಳೆಯಾಗಿ ಹಂತಹಂತವಾಗಿ ನಿರೂಪಿಸಿರುವ ಈ ಪುಸ್ತಕವು ವಿದ್ಯಾರ್ಥಿ-ಅಧ್ಯಾಪಕರಿಗೆ ಕೇವಲ ಕಲಿಕೆಗಷ್ಟೇ ಅಲ್ಲ , ಒಂದು ಆಕರ-ಮಾದರಿಯಾಗಿ ಬಹುಕಾಲ ಉಳಿಯುವ ಕೃತಿಯಾಗಿದೆ.
ಪೂಜ್ಯ ಡಿಎಲ್‌ಎನ್ ಅವರ 'ಶಬ್ದವಿಹಾರ', ತೀನಂಶ್ರೀ ಅವರ 'ಕನ್ನಡ ಮಧ್ಯಮ ವ್ಯಾಕರಣ' ಇವೆಲ್ಲದರ ಗುಣ, ಆಂತರಿಕ ಸ್ವಾರಸ್ಯ 'ಕನ್ನಡ ವ್ಯಾಕರಣ ಪ್ರವೇಶ'ದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಗೋಪಾಲರಿಂದ ಇಂಥ ಉಪಯುಕ್ತ ಆಕರ ಗ್ರಂಥಗಳು ಹೀಗೆಯೇ ಮೂಡಿಬರಲೆಂದು ಹಾರೈಸುತ್ತೇನೆ.
ಇದೇ ಪುಸ್ತಕದ ಬಗ್ಗೆ ಬೇದ್ರೆ ಮಂಜುನಾಥರೂ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ. Read more...




