Sunday, March 15, 2009

ಮಾತಾಡುವ ಚಿತ್ರಗಳು - ೬: ನೆನಪಿನ ಹಸ್ತಾಕ್ಷರಗಳು


ಡಾ| ಶಿವರಾಮ ಕಾರಂತರು ೧೯೯೭ರಲ್ಲಿ ನನ್ನ ಪತ್ರಕ್ಕೆ ಬರೆದ ಉತ್ತರ ಈ ಹಿಂದೆ ಶ್ರೀನಿಧಿಯ ಪ್ರಪಂಚದಲ್ಲಿ ಪ್ರಕಟವಾಗಿದ್ದು ನಿಮಗೆ ನೆನಪಿರಬಹುದು. ಈ ಬಾರಿಯ ಮಾತಾಡುವ ಚಿತ್ರಗಳಲ್ಲಿ ಇನ್ನಷ್ಟು ಹಿರಿಯರ ಹಸ್ತಾಕ್ಷರಗಳಿವೆ. ಇವೆಲ್ಲ ಹಸ್ತಾಕ್ಷರಗಳ ಮೂಲ ನನ್ನ ಅಮ್ಮನ ಕಾಲೇಜು ದಿನಗಳ ಆಟೋಗ್ರಾಫ್ ಪುಸ್ತಕ.

Read more...

Thursday, March 12, 2009

ಶ್ರೀನಿಧಿಯ ಪ್ರಪಂಚಕ್ಕೆ ಮೂರು ವರ್ಷ


೨೦೦೬ರ ಮಾರ್ಚ್ ೧೧ರಂದು ಬ್ಲಾಗಮಂಡಲಕ್ಕೆ ಬಂದ ಶ್ರೀನಿಧಿಯ ಪ್ರಪಂಚಕ್ಕೆ ನಿನ್ನೆ ಹ್ಯಾಪಿ ಬರ್ತ್‌ಡೇ ಹೇಳಬೇಕಿತ್ತು. ಆದರೆ ಯಥಾಪ್ರಕಾರ ನನಗೆ ಮರೆತುಹೋಯಿತು! :-)

ಶ್ರೀನಿಧಿಯ ಪ್ರಪಂಚಕ್ಕೆ ಬಿಲೇಟೆಡ್ ವಿಷಸ್! ಹಾಗೆಯೇ ಈ ಮೂರು ವರ್ಷಗಳಲ್ಲಿ ಶ್ರೀನಿಧಿಯ ಪ್ರಪಂಚದ ಭಾಗವೇ ಆಗಿಹೋಗಿರುವ ನಿಮಗೆಲ್ಲರಿಗೂ ಹೃತ್ಪೂರ್ವಕ ಥ್ಯಾಂಕ್ಸು!!

ನನ್ನ ಪ್ರಪಂಚದ ಕಡೆ ಹೀಗೆಯೇ ಬಂದು ಹೋಗುತ್ತಿರಿ.

ಪ್ರೀತಿಯಿಂದ,
ಶ್ರೀನಿಧಿ

Read more...

Monday, March 09, 2009

ಮಾತಾಡುವ ಚಿತ್ರಗಳು - ೫: ಜೈಲಿಗೆ ಸ್ವಾತಂತ್ರ್ಯ ಬಂತು!


ಶೇಷಾದ್ರಿ ರಸ್ತೆಯ ಕೇಂದ್ರ ಕಾರಾಗೃಹ ಬೆಂಗಳೂರಿನ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲೊಂದು. ಈಚಿನವರೆಗೂ ಅಲ್ಲಿದ್ದ ಬಂದೀಖಾನೆ ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರವಾದ ಮೇಲೆ ಹೊಸರೂಪ ಪಡೆದಿರುವ ಈ ಸ್ಮಾರಕ ಈಗ ಸ್ವಾತಂತ್ರ್ಯ ಉದ್ಯಾನವನವಾಗಿ ಬದಲಾಗಿದೆ. ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಈ ಹೊಚ್ಚಹೊಸ ಲ್ಯಾಂಡ್‌ಮಾರ್ಕ್‌ಗೆ ನೀಡಿದ ಅನಿರೀಕ್ಷಿತ ಭೇಟಿಯ ಸಂದರ್ಭದಲ್ಲಿ ನನ್ನ ಮೊಬೈಲಿನಿಂದ ತೆಗೆದ ಕೆಲ ಛಾಯಾಚಿತ್ರಗಳು ಮಾತಾಡುವ ಚಿತ್ರಗಳ ಈ ಕಂತಿನಲ್ಲಿ.

Read more...

Tuesday, March 03, 2009

ಕಾಡಿನೊಳಗಿನ ಜೀವಕ್ಕೆ ಮತ್ತೊಂದು ಪ್ರಶಸ್ತಿಯ ಗೌರವ


ನಾಗರಹೊಳೆ ಚಿಣ್ಣಪ್ಪ ಎಂದೇ ಹೆಸರಾಗಿರುವ ವನ್ಯಪ್ರೇಮಿ ಶ್ರೀ ಕೆ ಎಂ ಚಿಣ್ಣಪ್ಪನವರನ್ನು ಇದೇ ತಿಂಗಳ ಐದರಂದು ಸಿಎನ್‌ಎನ್‌ ಐಬಿಎನ್ ವಾಹಿನಿ ಮುಂಬೈನಲ್ಲಿ ಸನ್ಮಾನಿಸಲಿದೆ. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಹಿರಿಯ ಸೇನಾನಿಗೆ ಶ್ರೀನಿಧಿಯ ಪ್ರಪಂಚದಿಂದ ಗೌರವಪೂರ್ವಕ ಅಭಿನಂದನೆಗಳು.

ನೀವು ಚಿಣ್ಣಪ್ಪನವರ ಬಗ್ಗೆ ಕೇಳಿಲ್ಲದಿದ್ದರೆ ಅವರ ಹೋರಾಟದ ಬದುಕಿನ ಚಿತ್ರಣ 'ಕಾಡಿನೊಳಗೊಂದು ಜೀವ'ವನ್ನು ಒಮ್ಮೆ ಓದಿ.

Read more...

Monday, March 02, 2009

ನವಕರ್ನಾಟಕದಲ್ಲಿ ಕಂಡದ್ದು...

ಮೊನ್ನೆ ಶನಿವಾರ ಒಂದಷ್ಟು ಪುಸ್ತಕಗಳ ಶಾಪಿಂಗ್‌ಗಾಗಿ ಮೈಸೂರಿನ ನವಕರ್ನಾಟಕ ಮಳಿಗೆಗೆ ಹೋಗಿದ್ದೆ. ಅಲ್ಲಿ ಕಂಡದ್ದು, ಒಂಥರಾ ಖುಷಿಕೊಟ್ಟದ್ದು ಈ ದೃಶ್ಯ :-)

Read more...

ಮಾತಾಡುವ ಚಿತ್ರಗಳು - ೪

Read more...

  © Free Blogger Templates Spain by Ourblogtemplates.com 2008

Back to TOP