Wednesday, January 28, 2009

ತಲೆ ಮೇಲೆ ಕುಂಬಳಕಾಯಿ!


ಕೆಲವರ್ಷಗಳ ಹಿಂದೆ ಕರ್ನಾಟಕದಲ್ಲಿ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾದಾಗ ಎಷ್ಟೆಲ್ಲ ಗಲಾಟೆಯಾಗಿತ್ತು ನೆನಪಿದೆಯಾ? ಪರವಿರೋಧದ ಚರ್ಚೆ, ಪ್ರತಿಭಟನೆಯ ಸುದ್ದಿ, ವ್ಯಂಗ್ಯಚಿತ್ರಗಳು - ಹೀಗೆ ಎಷ್ಟೊಂದು ದಿನ ಮಾಧ್ಯಮಗಳಲ್ಲಿ ಹೆಲ್ಮೆಟ್ಟೇ ತುಂಬಿಕೊಂಡಿತ್ತು.

ಇಂಥದ್ದೇ ಪರಿಸ್ಥಿತಿ ಈಗ ಸೃಷ್ಟಿಯಾಗಿರುವುದು ನೈಜೀರಿಯಾದಲ್ಲಿ. ಆದರೆ ಅಲ್ಲಿನ ಜನ ಮಾತ್ರ ಹೆಲ್ಮೆಟ್ ಕಡ್ಡಾಯ ಆದೇಶ ಹಾಗೂ ಹೆಲ್ಮೆಟ್‌ಗಳ ದುಬಾರಿ ಬೆಲೆಯ ವಿರುದ್ಧ ಕೂಗಾಡಿ ಕಿರುಚಾಡಿ ಸುಸ್ತುಮಾಡಿಕೊಳ್ಳುವ ಬದಲು ವಿನೂತನ ತಂತ್ರವನ್ನು ಕಂಡುಕೊಂಡಿದ್ದಾರೆ ಅಂತ ಬಿಬಿಸಿ ವರದಿಮಾಡಿದೆ.

ಸರ್ಕಾರಕ್ಕೆ ಶಿರಸ್ತ್ರಾಣ ಬೇಕು ತಾನೆ, ಮಾಡ್ತೀನಿ ತಡಿ ಅಂದುಕೊಂಡ ಯಾವನೋ ಪುಣ್ಯಾತ್ಮ ಒಣಗಿಸಿದ ಸೋರೆಬುರುಡೆಯನ್ನು ಹೆಲ್ಮೆಟ್ಟಿನ ಹಾಗೆ ಕಾಣುವಂತೆ ಕತ್ತರಿಸಿ ತಲೆಮೇಲಿಟ್ಟುಕೊಂಡು ರಸ್ತೆಗಿಳಿದಿದ್ದಾನೆ. ಅದನ್ನು ನೋಡಿ ಸಿಕ್ಕಾಪಟ್ಟೆ ಇಂಪ್ರೆಸ್ ಆದ ನೂರಾರು ಜನ ಇದೀಗ ಅದೇ ಐಡಿಯಾ ಉಪಯೋಗಿಸಲು ಶುರುಮಾಡಿದ್ದಾರಂತೆ. ಸೋರೆಬುರುಡೆ ಹೆಲ್ಮೆಟ್ಟಿನಂತೆ ಕಾಣಿಸಲು ಅದಕ್ಕೆ ಬಣ್ಣಬಳಿದು ಅದರ ಮೇಲೆ ಬ್ರಾಂಡ್ ನೇಮ್ ಬರೆದುಕೊಂಡವರೂ ಇದ್ದಾರಂತೆ!

ಇಂಥ ಬುರುಡೆದಾಸರನ್ನು ತಡೆಯಲು ಈಗ ಸರ್ಕಾರ ಪರದಾಡುತ್ತಿದೆ. ಎಚ್ಚರಿಸಿದ್ದಾಯ್ತು, ದಂಡ ಹಾಕಿದ್ದಾಯ್ತು, ಅರೆಸ್ಟ್ ಮಾಡಿದ್ದಾಯ್ತು, ಬೈಕುಗಳನ್ನು ಮುಟ್ಟುಗೋಲು ಹಾಕಿಕೊಂಡದ್ದೂ ಆಯ್ತು - ಜನ ಮಾತ್ರ ಯಾವುದಕ್ಕೂ ಬಗ್ಗುತ್ತಿಲ್ಲವಂತೆ.

ಜನರ ತಲೆಗೆ ಹೆಲ್ಮೆಟ್ ಹಾಕಲು ಹೊರಟ ಸರ್ಕಾರಕ್ಕೆ ಈಗ ತಲೆಚಚ್ಚಿಕೊಳ್ಳುವ ಕಾಲ!

Read more...

Monday, January 26, 2009

ಗಣರಾಜ್ಯೋತ್ಸವದ ಶುಭಾಶಯಗಳು!

Pic courtesy of Amul's wonderful site, http://www.amul.com/hits.html

ನಮ್ಮ ಗಣರಾಜ್ಯ ಸದೃಢ, ಸುರಕ್ಷಿತ ಹಾಗೂ ಸಮೃದ್ಧವಾಗಿರಲಿ!

Read more...

Tuesday, January 13, 2009

ನೋ ಅಂದು ನೋಡಿ

ಜನವರಿ ೧೩, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

Read more...

Friday, January 09, 2009

ಕತ್ತೆಯ ಬೆನ್ನೇರಿ ಬಂತು ಪುಸ್ತಕ ವಿಲಾಸ!


ಒಳ್ಳೆಯ ಗ್ರಂಥಾಲಯ ಒಂದು ವಿಶ್ವವಿದ್ಯಾಲಯಕ್ಕೆ ಸಮಾನ ಎನ್ನುತ್ತಾರೆ. ಜ್ಞಾನಪ್ರಸಾರದಲ್ಲಿ ಪುಸ್ತಕಗಳ ಹಾಗೂ ಗ್ರಂಥಾಲಯಗಳ ಪಾತ್ರಕ್ಕೆ ಸಾಟಿಯೇ ಇಲ್ಲ ಎನ್ನಬಹುದೇನೋ.

ಆದರೆ ಓದುವ ಆಸಕ್ತಿ ಇದ್ದರೂ ಪುಸ್ತಕಗಳೇ ಸಿಗದಿರುವುದು ಅನೇಕ ಸ್ಥಳಗಳಲ್ಲಿರುವ ಸಮಸ್ಯೆ. ಊಟತಿಂಡಿಗೇ ಪರದಾಡುವ ಸ್ಥಿತಿ ಇರುವಲ್ಲಿ ಗ್ರಂಥಾಲಯ ಹೇಗೆತಾನೆ ಬಂದೀತು? ಅದೂ ಬರಗಾಲ-ಬಡತನ-ಹಸಿವುಗಳಿಂದಲೇ ಗುರುತಿಸಿಕೊಳ್ಳುವ ಇಥಿಯೋಪಿಯಾದಂಥ ದೇಶದಲ್ಲಿ??

ಈ ಕಷ್ಟದ ಪ್ರಶ್ನೆಗೆ ಸುಲಭದ ಉತ್ತರ ಅಲ್ಲಿ ಕತ್ತೆಯ ಬೆನ್ನೇರಿ ಬಂದಿದೆ!

ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಇದೀಗ ಕತ್ತೆ ಗಾಡಿಯ ಮೇಲಿನ ಮೊಬೈಲ್ ಲೈಬ್ರರಿ ಓಡಾಡುತ್ತಿದೆಯಂತೆ. ಇಂತಹ ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿರುವುದು 'ಇಥಿಯೋಪಿಯನ್ ಬುಕ್ಸ್ ಫಾರ್ ಚಿಲ್ಡ್ರನ್ ಆಂಡ್ ಎಜುಕೇಷನಲ್ ಫೌಂಡೇಷನ್' ಎಂಬ ಸಂಸ್ಥೆ. ಇಥಿಯೋಪಿಯಾದ ಸ್ಥಳೀಯ ಭಾಷೆಗಳಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿರುವ ಈ ಸಂಸ್ಥೆ ಇದೀಗ ಕತ್ತೆ ಗಾಡಿಗಳ ಮೂಲಕ ಮಕ್ಕಳಿಗೆ ಪುಸ್ತಕ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ.

ಗ್ರಂಥಾಲಯಗಳಿಲ್ಲದ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಈ ಕತ್ತೆಗಾಡಿ ಈಗಾಗಲೇ ಬಹಳ ಜನಪ್ರಿಯತೆ ಗಳಿಸಿದೆ. ಓದುವುದರಲ್ಲಿ ಮಕ್ಕಳ ಆಸಕ್ತಿ ಹಾಗೂ ಅವರ ಕಲಿಕಾ ಸಾಮರ್ಥ್ಯ ಎರಡರಲ್ಲೂ ಪ್ರಗತಿ ಕಂಡುಬಂದಿದೆ ಎಂದು ಶಿಕ್ಷಕರು ಹೇಳುತ್ತಾರೆ. ಅಮೆರಿಕಾದಲ್ಲಿ ನೆಲಸಿರುವ ಇಥಿಯೋಪಿಯನ್ ವ್ಯಕ್ತಿಯೊಬ್ಬ ಈ ಅಭಿನಂದನೀಯ ಪ್ರಯತ್ನ ಕೈಗೊಂಡಿದ್ದಾನಂತೆ.

ಇಂಥದ್ದೇ ಇನ್ನೊಂದು ವಿಶಿಷ್ಟ ಪ್ರಯತ್ನ ಕೀನ್ಯಾದ ಈಶಾನ್ಯ ಭಾಗಗಳಲ್ಲಿ ನಡೆದಿದೆ. ಈ ಪ್ರದೇಶದ ಜನರಿಗೆ ಪುಸ್ತಕಗಳನ್ನು ತಲುಪಿಸಲು ಕೀನ್ಯಾ ನ್ಯಾಷನಲ್ ಲೈಬ್ರರಿ ಒಂಟೆಗಳನ್ನು ಬಳಸುತ್ತಿದೆಯಂತೆ.

ಒಂಟೆಯೋ ಕತ್ತೆಯೋ, ಓದುವ ಆಸಕ್ತಿಯಿರುವವರಿಗೆ ಪುಸ್ತಕ ತಲುಪುತ್ತಿದೆಯಲ್ಲ! ಅಷ್ಟು ಸಾಕು, ಏನಂತೀರಿ?

Read more...

Monday, January 05, 2009

ಹೊಸವರ್ಷದ ಮೊದಲ ಪ್ರಕಟಿತ ಬರಹ

ಹೊಸವರ್ಷದ ಮೊದಲ ಸುಧಾ ಸಂಚಿಕೆಯಿಂದ

Read more...

  © Free Blogger Templates Spain by Ourblogtemplates.com 2008

Back to TOP