ಕಾಡಿನೊಳಗಿನ ಜೀವಕ್ಕೆ ಮತ್ತೊಂದು ಪ್ರಶಸ್ತಿಯ ಗೌರವ
ನಾಗರಹೊಳೆ ಚಿಣ್ಣಪ್ಪ ಎಂದೇ ಹೆಸರಾಗಿರುವ ವನ್ಯಪ್ರೇಮಿ ಶ್ರೀ ಕೆ ಎಂ ಚಿಣ್ಣಪ್ಪನವರನ್ನು ಇದೇ ತಿಂಗಳ ಐದರಂದು ಸಿಎನ್‌ಎನ್ ಐಬಿಎನ್ ವಾಹಿನಿ ಮುಂಬೈನಲ್ಲಿ ಸನ್ಮಾನಿಸಲಿದೆ. ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಈ ಹಿರಿಯ ಸೇನಾನಿಗೆ ಶ್ರೀನಿಧಿಯ ಪ್ರಪಂಚದಿಂದ ಗೌರವಪೂರ್ವಕ ಅಭಿನಂದನೆಗಳು.
ನೀವು ಚಿಣ್ಣಪ್ಪನವರ ಬಗ್ಗೆ ಕೇಳಿಲ್ಲದಿದ್ದರೆ ಅವರ ಹೋರಾಟದ ಬದುಕಿನ ಚಿತ್ರಣ 'ಕಾಡಿನೊಳಗೊಂದು ಜೀವ'ವನ್ನು ಒಮ್ಮೆ ಓದಿ.

2 ಪ್ರತಿಕ್ರಿಯೆಗಳು:
ಶ್ರೀನಿಧಿಯವರೇ,
ಕನ್ನಡ ಬ್ಲಾಗ್ ಸದಸ್ಯರ ಕೂಡದಲ್ಲಿ ನೋಡಿ..ನಿಮ್ಮ ಬ್ಲಾಗಿಗೆ ಬಂದೆ...ನಾಗರಹೊಳೆ ಚಿಣ್ಣಪ್ಪನವರನ್ನು ಸನ್ಮಾನಿಸುತ್ತಿರುವುದು ಖುಷಿಯ ವಿಚಾರ ಅವರ ಪುಸ್ತಕ "ಕಾಡಿನೊಳಗೊಂದು ಜೀವ" ಓದಿದ್ದೇನೆ...[ನಾನು ಛಾಯಾಗ್ರಹಕನಾದ್ದ್ರರಿಂದ ವನ್ಯ ಜೀವಿಗಳ ಬಗ್ಗೆ ಕುತೂಹಲ ಜಾಸ್ತಿ] ಧನ್ಯವಾದಗಳು...
ಆಹಾಂ! ನನ್ನ ಬ್ಲಾಗಿನೊಳಗೊಮ್ಮೆ ಇಣುಕಿ...ಮನಸಾರೆ ನಗಲು ಇತ್ತೀಚಿನ ಹೊಸ ಲೇಖನ ಭೂಪಟಗಳನ್ನು ನೋಡಿ... ಇಷ್ಟವಾದರೆ ಪ್ರತಿಕ್ರಿಯಿಸಿ....
hi,i m jyoti.i m a regular reader of u r blog.keep it up.bye
Post a Comment